ಹಲಸೂರು ಗೇಟ್ ಠಾಣೆ ಪೊಲೀಸರು ಕಾಟನ್ಪೇಟೆಯ ಸೈಯದ್ ಅಯಾಜ್ ಅಲಿಯಾಸ್ ಅಯಾಜ್ ಚೌಧರಿ ಎಂಬಾತನನ್ನು ಬಂಧಿಸಿದ್ದಾರೆ. ಆಭರಣ ವ್ಯಾಪಾರಿಯ ಬ್ಯಾಗ್ನಲ್ಲಿದ್ದ 37 ಲಕ್ಷ ರೂ. ಮೌಲ್ಯದ 23 ಕೆ.ಜಿ. 260 ಗ್ರಾಂ ಬೆಳ್ಳಿಯ 49 ಗಟ್ಟಿಗಳನ್ನು ಕಳವು ಮಾಡಿದ್ದ ಆರೋಪ ಈತನ ಮೇಲಿದೆ. ಅಮರ್ ನಾಗನಾಥ್ ಕಾಟೆ ಎಂಬುವರ ಮಗ ಅಂಗಡಿ ಬಳಿ ಬಂದು, ದ್ವಿಚಕ್ರ ವಾಹನ ನಿಲ್ಲಿಸಿ, ಬ್ಯಾಗ್ ಅನ್ನು ಫುಟ್ಬೋರ್ಡ್ನಲ್ಲಿಟ್ಟು, ಹೆಲ್ಮಟ್ ತೆಗೆಯುವ ವೇಳೆ ಗಟ್ಟಿಗಳಿದ್ದ ಬ್ಯಾಗ್ ಕಳವಾಗಿತ್ತು. ಆರೋಪಿ ಸುಮಾರು 50 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.