ಕಲಬುರಗಿ: ಸೇಡಂ ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ವೈದ್ಯಾಧಿಕಾರಿಯನ್ನ ಅಮಾನತು ಮಾಡಲು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹ
ಕಲಬುರಗಿ : ಕಳೆದ ಭಾನುವಾರ ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ನಡೆದಿದ್ದ ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಸೇಡಂ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ ನಾಗರಾಜ್ ಮನ್ನೆರನ್ನ ತಕ್ಷಣ ಅಮಾನತು ಮಾಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಭೀಮ್ ಆರ್ಮಿ ಸಂಘಟನೆ ಆಗ್ರಹಿಸಿದೆ.. ಅ21 ರಂದು ಬೆಳಗ್ಗೆ 11.30 ಕ್ಕೆ ಮಾಹಿತಿ ಲಭ್ಯವಾಗಿದೆ.. ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಓ ಅಮಾನತಿಗೆ ಮುಂದಾದ ಸರ್ಕಾರ, ತಾಲೂಕ ಆಸ್ಪತ್ರೆ ವೈದ್ಯಾಧಿಕಾರಿ ಅಮಾನತ್ತಿಗೆ ಯಾಕೆ ಮುಂದಾಗ್ತಿಲ್ಲ.. ಸರ್ಕಾರದ ಆದೃಶ ಉಲ್ಲಂಘಿಸಿ ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಸೇಡಂ ತಾಲೂಕ ವೈದ್ಯಾಧಿಕಾರಿ ಡಾ ನಾಗರಾಜ್ ಮನ್ನೆರನ್ನ ಅಮಾನತು ಮಾಡಬೇಕೆಂದು ದಲಿತ ಸಂಘಟನೆಗಳು ಆಗ್ರಹಿಸಿವೆ