ಬಳ್ಳಾರಿ: ರಸ್ತೆ ಅಗಲೀಕರಣ ನೆಪದಲ್ಲಿ ನಗರದ ಪಾಲಿಕೆ ಕಾಂಪ್ಲೆಕ್ಸ್ ತೆರವಿಗೆ ಮುಂದಾದ ಸರ್ಕಾರದ ನಡೆಗೆ ಬಿಜೆಪಿ ವಿರೋಧ #localissue
ಬಳ್ಳಾರಿ ನಗರದ ನಟರಾಜ್ ಟಾಕೀಸ್ ಎದುರುಗಡೆ ಇರುವ ಮಹಾನಗರ ಪಾಲಿಕೆಯ ಕಾಂಪ್ಲೆಕ್ಸ್ ಗಳನ್ನು ಅನುಮತಿ ಇಲ್ಲದೆ ಏಕಾಏಕಿ ಕೆಡವಲು ಮುಂದಾದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆ ವಿರುದ್ಧ ಮಾಜಿ ಸಂಸದರು. ಮಾಜಿ ಸಚಿವರಾದ ಬಿ.ಶ್ರೀರಾಮುಲುರ ನೇತೃತ್ವದಲ್ಲಿ ಬಿಜೆಪಿಯ ಮುಖಂಡರುಗಳು ಇಂದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಗಾಲಿ ಸೋಮಶೇಖರರೆಡ್ಡಿ, ಬುಡಾದ ಮಾಜಿ ಅಧ್ಯಕ್ಷ ಪಿ.ಪಾಲಣ್ಣ, ಮಹಾನಗರ ಪಾಲಿಕೆಯ ಸದಸ್ಯರಾದ ಇಬ್ರಾಹಿಂ ಬಾಬು ಇದ್ರು.