ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಮರಾಠ ಗ್ರಾಮದಲ್ಲಿ ರಸ್ತೆ ಕಾಮಗಾರಿ ವಿಳಂಬಗೊಂಡ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರು ಕೆಆರ್ಐಡಿಎಲ್ ಅಧಿಕಾರಿಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಬಾನುವಾರ ನಡೆದಿದೆ. ಸ್ಥಳೀಯರು ಮರಾಠ –ಬಾಗಲವಾಡ ರಸ್ತೆಯ ದುಸ್ಥಿತಿಯನ್ನು ಸಚಿವರಿಗೆ ತಿಳಿಸಿದರು. ಸರ್ಕಾರ ಬಿಡುಗಡೆ ಮಾಡಿದ 2 ಕೋಟಿ ಅನುದಾನದ ಕೆಲಸ ಇನ್ನೂ ಆರಂಭವಾಗಿಲ್ಲವೆಂಬ ಸಂಗತಿ ಸಚಿವರನ್ನು ಕೋಪಕ್ಕೆ ದೂಡಿತು. ಈ ವೇಳೆ ಬೆಳಗ್ಗೆಯೇ ಕಾಮಗಾರಿ ಶುರುವಾಗಬೇಕು. ಇಲ್ಲದಿದ್ದರೆ ಕಟ್ಟಿಹಾಕಿ ಒದಿತ್ತೀನೆ, ನೇರ ತನಿಖೆ ಮಾಡಿ ಜೈಲಿಗೆ ಕಳುಹಿಸುತ್ತೇನೆ ಎಂದು ಸಚಿವ ಬೋಸರಾಜು ಎಚ್ಚರಿಕೆ ನೀಡಿದರು.