ಮಾಗಡಿ: ಮಾಜಿ ಶಾಸಕರ ಕಾರನ್ನ ನಾನು ಬಳಕೆ ಮಾಡುತ್ತಿರಲಿಲ್ಲ: ಪಟ್ಟಣದಲ್ಲಿ ಕೈ ಮುಖಂಡ ಕೃಷ್ಣಮೂರ್ತಿ
ಮಾಜಿ ಶಾಸಕರಾದಂತ ಎ ಮಂಜಣ್ಣನವರ ಕಾರನ್ನ ನಾನು ಉಪಯೋಗ ಮಾಡ್ತಿರ್ಲಿಲ್ಲ ಅಂತ ಹೇಳಿ ಕಾಂಗ್ರೆಸ್ ಮುಖಂಡ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ತಿಳಿಸಿದರು. ಮಾಗಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕಳೆದ ಎರಡು ದಿನಗಳ ಹಿಂದೆ ಎಷ್ಟೇ ಡಿಸಿಎಂ ಮನೆಯ ಮುಂದೆ ನಕಲಿ ನಂಬರ್ ಪ್ಲೇಟ್ ನ ಕಾರು ನಿಂತಿದ್ದು ಆ ಕಾರು ಮಾಜಿ ಶಾಸಕ ಮಂಜುನಾಥ್ ರವರಿಗೆ ಸೇರಿದ್ದು ನಿಜಾ ಈ ಕಾರನ್ನ ಕೃಷ್ಣಮೂರ್ತಿ ಅವರಿಗೆ ನೀಡಿದ್ದೆ ಅವರೆ ಬಳಕೆ ಮಾಡುತ್ತಿದರು ಎಂಬ ಆರೋಪ ಕೇಳಿ ಬಂದಿತ್ತು. ಇದು ಸತ್ಯಕ್ಕೆ ದೂರವಾದಂತದ್ದು ನಾನು ಆ ಕಾರನ್ನ ಬಳಕೆ ಮಾಡ್ತಿರಲಿಲ್ಲ ಅಂತ ಹೇಳಿ ಸ್ಪಷ್ಟಪಡಿಸಿದ್ದರು.