ಎಂಆರ್‌ಐ ಸ್ಕ್ಯಾನ್ ಮಾಡಿಸಿ ಎಂದು ವೈದ್ಯರೇನಾದರೂ ಚೀಟಿ ಬರೆದುಕೊಟ್ಟರೆ ಬಡವರಿಗೆ, ಮಧ್ಯಮ ವರ್ಗದವರಿಗೆ ಎಲ್ಲಿಲ್ಲದ ಭಯ. ಸಾವಿರಾರು ರೂಪಾಯಿ ಶುಲ್ಕ, ತುರ್ತು ಪರಿಸ್ಥಿತಿ ಇದ್ದರೂ ವಾರಗಟ್ಟಲೆ ಕಾಯಬೇಕಾದ ಅನಿವಾರ್ಯತೆ... ಇಂಥ ಕಾರಣಗಳಿಂದಾಗಿ ಎಂಎಆರ್‌ಐ ಎಂದರೆ ಎಂಥವರೂ ನಡುಗುವ ಪರಿಸ್ಥಿತಿ. ಆದರೆ, ಬಳ್ಳಾರಿ ಜಿಲ್ಲೆಯ ಅಧಿಕಾರಿಗಳು, ರಾಜಕಾರಣಿಗಳ ಮುನ್ನೋಟ, ನಿರಂತರ ಪ್ರಯತ್ನದ ಫಲವಾಗಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಅತ್ಯಾಧುನಿಕ ಎನಿಸಿದ ಎಂಆರ್‌ಐ ಯಂತ್ರವನ್ನು ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾಗಿದ್ದು, ಬಡವರಿಗೆ ಸಂಜೀವಿನಿಯಾಗಿ ಪರಿಣಮಿಸಿದೆ. ರಾಷ್ಟ್ರೀಯ ಖನಿಜನ ಅಭಿವೃದ್ಧಿ ನಿಗಮದ ‘ಕಾರ್ಪೊರೇಟರ್ ಸಾಮಾಜಿಕ ಹೊಣೆಗಾರಿಕೆ’ ನಿಧಿಯ ಅಡಿಯಲ್ಲಿ ಖರೀದಿಸಿ ತರಲಾಗಿರುವ ಎಂಆರ್‌ಐ ಯಂತ್