ಮಂಗಳೂರು: ನಗರದಲ್ಲಿ ಹವ್ವಾ ನಸೀಮಾ-ಲಯಾ ನಸೀಮಾರಿಗೆ ಜನಸಾಮಾನ್ಯರ ಬದುಕಿನ ಸಂಕಷ್ಟ ಪರಿಚಯಿಸಿದ ಸ್ಪೀಕರ್ ಯು.ಟಿ ಖಾದರ್
ಜನಸಾಮಾನ್ಯರ ಬದುಕಿನ ನೈಜ ಚಿತ್ರಣವನ್ನು ರಾಜ್ಯ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ತನ್ನ ಪುತ್ರಿ ಹವ್ವಾ ನಸೀಮಾ ಹಾಗೂ ಸಹೋದರ ಇಫ್ತಿಕಾರ್ ಅಲಿಯ ಪುತ್ರಿ ಲಯಾ ನಸೀಮಾ ಅವರಿಗೆ ಪರಿಚಯಿಸುವ ಅಪರೂಪದ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದಿದ್ದಾರೆ. ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರ್ಥಿಕವಾಗಿ ಹಿಂದುಳಿದ ಮತ್ತು ಇತರ ಆಯ್ದ ಸ್ತರದ ಜನರ ಮನೆಗೆ ಭೇಟಿ ನೀಡಿದ ಯುಟಿ ಖಾದರ್ ಜನಸಾಮಾನ್ಯರ ಬದುಕಿನ ಚಿತ್ರಣವನ್ನು ಹವ್ವಾ ನಸೀಮಾ ಮತ್ತು ಲಯಾ ನಸೀಮಾರಿಗೆ ಪರಿಚಯಿಸಿ ಇತರ ಜನಪ್ರತಿನಿಧಿಗಳು, ಸಮಾಜ ಸೇವಕರಿಗೆ ಮಾದರಿಯಾದರು.