ಶ್ರೀರಂಗಪಟ್ಟಣ: ಮೈಸೂರಿನ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 5 ಜಾನುವಾರುಗಳನ್ನು ರಕ್ಷಿಸಿದ ಪಟ್ಟಣದ ಪೊಲೀಸರು
ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರ ಕಾರ್ಯಾಚರಣೆಯಿಂದ ಮೈಸೂರಿನ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 5 ಜಾನುವಾರುಗಳನ್ನು ಹಿಡಿದು ಶ್ರೀ ರಂಗ ಪೊಲೀಸರ ವಶಕ್ಕೆ ನೀಡಿದ್ದಾರೆ. ಚನ್ನರಾಯ ಪಟ್ಟಣದಿಂದ ಬನ್ನೂರು ಮಾರ್ಗವಾಗಿ ವಾಹನದಲ್ಲಿ 5 ಜಾನುವಾರುಗಳ ತುಂಬಿ ವಾಹನದಲ್ಲಿ ಸಾಗಿಸುವ ಮಾಹಿತಿ ಮೇರೆಗೆ ಶ್ರೀನಿವಾಸ ಅಗ್ರಹಾರಗ್ರಾಮದ ಬಳಿ ಹೈವೆ ರಸ್ತೆಯಲ್ಲಿ ವಾಹನ ತಡೆದ ಕಾರ್ಯಕರ್ತರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳೀಯ ಪಟ್ಟಣ ಪೊಲೀಸ್ ಠಾಣೆ ಪಿಎಸ್ಐ ಬಿ.ಜಿ. ಕುಮಾರ್, ಹಾಗೂ ಎಎಸ್ಐ ಉದಯಕುಮಾರ್ ತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಜಾನುವಾರು ತುಂಬಿದ ವಾಹನ ಸಹಿತ ಚಾಲಕನೊಂದಿಗೆ ಕರೆತಂದು ತನಿಖೆ ನಡೆಸಿ ಕಾರ್ಯಕರ್ತರ ದೂರಿ