మంత్రాలయం: ರಾಯಚೂರು ಗ್ರಾಮೀಣ : RSS ರಾಜಕೀಯ ಪಕ್ಷವಲ್ಲ ದೇಶದ ಶ್ರೇಷ್ಠತೆ ಸಾರುವಂತ ಸಂಸ್ಥೆ
RSS ರಾಜಕೀಯ ಪಕ್ಷವಲ್ಲ ದೇಶದ ಸಂಘಟನೆ, ದೇಶದ ಶ್ರೇಷ್ಠತೆ ಸಾರುವಂತ ಸಂಸ್ಥೆ ಎಂದು ಮಂತ್ರಾಲಯ ಪೀಠಾಧಿಪತಿ ಸುಭುದೇಂದ್ರ ತೀರ್ಥರ ಹೇಳಿದರು. ರಾಜ್ಯದಲ್ಲಿ RSS ವರ್ಸಸ್ ಕಾಂಗ್ರೆಸ್ ವಿಚಾರವಾಗಿ ಮಾತನಾಡಿದ ಅವರು, ಆರ್ಎಸ್ಎಸ್ ರಾಜಕೀಯ ಪಕ್ಷವಲ್ಲ ದೇಶದ ಸಂಘಟನೆ, ದೇಶದ ಶ್ರೇಷ್ಠತೆ ಸಾರುವಂತ ಸಂಸ್ಥೆ. ದೇಶದ ಜನರಲ್ಲಿ ದೇಶದ ಬಗ್ಗೆ ಅಭಿಮಾನ ಬೆಳೆಸುವ ಸಂಸ್ಥೆ. ಆರ್ ಎಸ್ ಎಸ್ ಗೆ ಯಾವುದೇ ನಿರ್ಬಂಧ ,ರಾಜಕೀಯ ಹಿನ್ನೆಲೆಯನ್ನ ಯಾರು ಕಟ್ಟಲು ಸಾಧ್ಯವಿಲ್ಲ. ಎಲ್ಲರಿಗೂ ವ್ಯಕ್ತಿ ಸ್ವಾತಂತ್ರ ಇದೆ, ಸಂವಿಧಾನದ ದತ್ತ ಅಧಿಕಾರವಿದೆ. ಆರ್ ಎಸ್ ಎಸ್ ನಲ್ಲಿ ಪಾಲ್ಗೊಳ್ಳುವಂತದ್ದು ಅವರವರ ವ್ಯಕ್ತಿ ಸ್ವಾತಂತ್ರ್ಯ. ನಾವ್ಯಾರು ಹೋಗಬಾರದು ಎನ್ನುವುದು ಸಂವಿಧಾನ ವಿರೋಧಿ ಆಗುತ್ತೆ.