ರಾಮದುರ್ಗ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಆರಂಭ
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಆರಂಭ. ಜೈ ಕಿಸಾನ್ ಖಾಸಗಿ ಮಾರುಕಟ್ಟೆಯ ಅನುಮತಿಯನ್ನು ಸರಕಾರ ರದ್ದುಗೊಳಿಸಿದ ಹಿನ್ನೆಲೆಯಲ್ಲಿ, ಖಾಸಗಿ ಮಾರುಕಟ್ಟೆ ಸಂಪೂರ್ಣವಾಗಿ ಬಂದ್ ಆಗಿದೆ. ಇದರಿಂದಾಗಿ ರೈತರು ತಮ್ಮ ತರಕಾರಿಗಳನ್ನು ಸರಕಾರಿ ಎಪಿಎಂಸಿಯಲ್ಲಿ ನೀಡುತ್ತಿರುವುದಕ್ಕೆ ಎಪಿಎಂಸಿ ವರ್ತಕರು ಸಂತಸ ವ್ಯಕ್ತಪಡಿಸಿದ್ದಾರೆ ಖಾಸಗಿ ಮಾರುಕಟ್ಟೆ ಆರಂಭವಾದಾಗಿನಿಂದಲೂ ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದ ಸರಕಾರಿ ಎಪಿಎಂಸಿಯಲ್ಲಿ ಬುಧವಾರ ರೈತರು ತಾವು ಬೆಳೆದ ತರಕಾರಿಗಳನ್ನು ಮಾರಾಟ ಮಾಡಿದರು