ಮುಂಡಗೋಡ: ಪಟ್ಟಣದ ಟಿ.ಎಮ್.ಎಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ರವಿಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಬಾಬಣ್ಣ ಅವಿರೋಧ ಆಯ್ಕೆ
ಮುಂಡಗೋಡ ತಾಲೂಕಿನ ಪ್ರತಿಷ್ಠಿತ ಟಿ.ಎಮ್.ಎಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ರವಿಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಬಾಬಣ್ಣ ಲಾಡನವರ್ ಅವರು ಅವಿರೋಧವಾಗಿ ಶನಿವಾರ ಸಂಜೆ 3.30ಕ್ಕೆ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಮಾಜಿ ಶಾಸಕರಾಸ ವಿ.ಎಸ್.ಪಾಟೀಲ್, ಕೆ.ಪಿ.ಸಿ.ಸಿ ಸದಸ್ಯರಾದ ವಿವೇಕ್ ಹೆಬ್ಬಾರ್ ಅವರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೃಷ್ಣ ಹಿರೇಹಳ್ಳಿ, ಹಿರಿಯ ಸಹಕಾರಿಗಳಾದ ಎಚ್. ಎಮ್. ನಾಯ್ಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಞಾನೇಶ್ವರ ಗುಡಿಯಾಳ ಇದ್ದರು.