ಬೀದರ್: ನಗರದ ಆದರ್ಶ ಕಾಲೋನಿಯಲ್ಲಿ 7ವರ್ಷದ ಮಗಳನ್ನು 3ನೇ ಮಹಡಿಯಿಂದ ತಳ್ಳಿ ಕೊಲೆಗೈದ ಪಾಪಿ ಮಲತಾಯಿಗೆ ಆರೆಸ್ಟ್ ಮಾಡಿದ ಗಾಂಧಿಗಂಜ್ ಪೊಲೀಸರು
Bidar, Bidar | Sep 16, 2025 7ವರ್ಷದ ಮಗಳನ್ನು ಆಕೆ ಮಲತಾಯಿ 3ನೇ ಮಹಡಿಯಿಂದ ತಳ್ಳಿ ಕೊಲೆಗೈದ ಹೃದಯವಿದ್ರಾವಕ ಘಟನೆ ಆ. 27ರಂದು ನಡೆದಿದ್ದು ಸೆ.12ಕ್ಕೆ ದೂರು ದಾಖಲಾಗಿತ್ತು. ಆದ್ರೆ ಸೆ.15ರಂದು ರಾತ್ರಿ 10ಕ್ಕೆ ಗಾಂಧಿ ಗಂಜ್ ಪೊಲೀಸರಿಂದ ವಿಷಯ ಲಭ್ಯವಾಗಿದೆ. ಮೃತ ಬಾಲಕಿ ಸಾನ್ವಿ ಸಿದ್ಧಾಂತ(7) ಎನ್ನಲಾಗಿದೆ. ಕೃತ್ಯದ ದೃಶ್ಯ ನೆರೆಮನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಬಾಲಕಿ ಅಜ್ಜಿ ವಿಜಯಶ್ರೀ ನೀಡಿದ ದೂರಿನ ಮೇರೆಗೆ ಮಲತಾಯಿ ರಾಧಾ ಆರೆಸ್ಟ್ ಆಗಿದ್ದಾಳೆ