ಚಾಮರಾಜನಗರ: ಚಾಮರಾಜನಗರ ಸ್ವಯಂ ಬಂದ್ : ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ ಕಾರ್ಯಕರ್ತರು
ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆತ ಖಂಡಿಸಿ ಸಂವಿಧಾನ ರಕ್ಷಣಾ ಸಮಿತಿಯಿಂದ ಸ್ವಯಂ ಬಂದ್ ಗೆ ಕರೆ ನೀಡಿತು ಚಾಮರಾಜನಗರದ ದೊಡ್ಡ ಅಂಗಡಿ ಬೀದಿಗಳಲ್ಲಿ ಕೆಲ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು. 20 ರಿಂದ 30 ಜನ ಪ್ರತಿಭಟನಾಕಾರರು ಬೈಕ್ ಮೂಲಕ ತೆರಳಿ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ ಘಟನೆ ನಡೆಯಿತು. ಇನ್ನೂ ದೊಡ್ಡ ಅಂಗಡಿಯ ಸಿಟಿಜನ್ ಅಂಗಡಿಯ ಮಾಲೀಕ ಹಾಗೂ ನಗರಸಭೆ ಮಾಜಿ ಅಧ್ಯಕ್ಷೆ ಆಶಾ ಅವರ ಪತಿ ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದು ಪ್ರತಿಭಟನಾಕಾರರೇ ಸೇಟರ್ ಅನ್ನು ಹಾಕಿದರು.