ಮಂಡ್ಯ: ಸುಪ್ರೀಂ ಕೋರ್ಟ್ ಜಡ್ಜ್ ಮೇಲೆ ಶೂ ಎಸೆತ ಪ್ರಕರಣದ ಆರೋಪಿಗಳ ಗಲ್ಲಿಗೇರಿಸಲು ಒತ್ತಾಯಿಸಿ ನಗರದಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ
Mandya, Mandya | Oct 9, 2025 ಸುಪ್ರೀಂಕೋರ್ಟ್ ಜಡ್ಜ್ ಮೇಲೆ ಶೂ ಎಸೆತ ಪ್ರಕರಣದ ಆರೋಪಿಗಳ ಗಲ್ಲಿಗೇರಿಸಲು ಒತ್ತಾಯಿಸಿ ಮಂಡ್ಯದಲ್ಲಿ ವಿವಿಧ ಸಂಘಟನೆಗಳಿಂದ ಗುರುವಾರ ಪ್ರತಿಭಟನೆ ನಡೆಯಿತು. ಅವಕಾಶ ವಂಚಿತ ಸಮುದಾಯಗಳ ವೇದಿಕೆ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ. ಸಂಜಯ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರತದ ನ್ಯಾಯಾಂಗಕ್ಕೆ ಅಗೌರವ ತೋರಿದ್ದಾರೆ ಎಂದು ರಾಕೇಶ್ ಕಿಶೋರ್ ಹಾಗೂ ಭಾಸ್ಕರ್ ರಾವ್ ಗಲ್ಲಿಗೇರಿಸಲು ಒತ್ತಾಯಿಸಿದರು. ಸುಪ್ರೀಂ ಕೋರ್ಟ್ ಜಡ್ಜ್ ಮೇಲೆ ಶೂ ಎಸೆತ ಖಂಡನೀಯ. ಇಂತಹ ಘಟನೆ ನಡೆಯಬಾರದಿತ್ತು. ಈ ರೀತಿಯ ಕೃತ್ಯದಲ್ಲಿ ಭಾಗಿಯಾದ ವಕೀಲನ ಮೇಲೆ ಕಾನೂನು ಕ್ರಮ ಆಗಬೇಕು ಎಂದು ಒತ್ತಾಯಿಸಿದರು.