ಆಳಂದ: ಕೇಂದ್ರದ ಸಾಧನೆ ಮನೆ - ಮನೆಗೆ ತೆರಳಿ ಪ್ರಚಾರ ಮಾಡಿ ಪಟ್ಟಣದಲ್ಲಿ ಬೀದರ್ ಬಿಜೆಪಿ ಅಭ್ಯರ್ಥಿ ಭಗವಂತ
ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಹಾಗೂ ಐದು ವರ್ಷಗಳಲ್ಲಿ ಬೀದರ್ಕ ಲೋಕ ಸಭಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮತದಾರರ ಮನೆ ಮನೆಗೆ ಮುಟ್ಟಿಸಬೇಕು. ಅಧಿಕಾರದ ಅವಧಿಯಲ್ಲಿ ಸೇವಕನಂತೆ ಕಾರ್ಯನಿರ್ವಹಿಸಿದ ಪ್ರಗತಿಯನ್ನು ಪ್ರಚಾರ ಮಾಡಬೇಕು ಎಂದು ,ಬೀದರ್ ಬಿಜೆಪಿ ನಿಯೋಜಿತ ಅಭ್ಯರ್ಥಿ ಭಗವಂತ ಖೂಬಾ ಅವರು ಕಾರ್ಯಕರ್ತರಿಗೆ ಮನವಿ ಮಾಡಿಕೊಂಡರು.ಪಟ್ಟಣದ ಆರ್ಯ ಸಮಾಜ ಸಭಾಂಗಣದಲ್ಲಿ ಮಂಡಲ ಮಟ್ಟದ ಬಿಜೆಪಿ ಪ್ರಮುಖರ ಸಭೆಮಾತನಾಡಿದರು.ಹುಮನಾಬಾದ ಶಾಸಕ ಸಿದ್ದು ಪಾಟೀಲ್, ಮಜಿ ಶಾಸಕ ಸುಭಾಷ್ ಗುತ್ತೇದಾರ ಮಾತನಾಡಿದರು.ಮಾಜಿ ಜಿಲ್ಲಾ ಪಂ. ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ ಸೇರಿದಂತೆ ಹಲವರು ಇದ್ದರು.