ಬ್ರಹ್ಮಾವರ: ಕೊಕ್ಕರ್ಣೆಯಲ್ಲಿ ಚೂರಿ ಇರುತಕ್ಕೊಳಗಾಗಿ ಅಮಾನುಷವಾಗಿ ಹತ್ಯೆಯಾದ ರಕ್ಷಿತಾ ಪೂಜಾರಿ ಮನೆಗೆ ಶಾಸಕ ಸುವರ್ಣ ಭೇಟಿ
ಕೊಕ್ಕರ್ಣೆಯಲ್ಲಿ ಇತ್ತೀಚೆಗೆ ಯುವಕನಿಂದ ಚೂರಿ ಇರಿತಕ್ಕೀಡಾಗಿ ಅಮಾನುಷವಾಗಿ ಹತ್ಯೆಯಾದ ರಕ್ಷಿತಾ ಪೂಜಾರಿಯವರ ಮನೆಗೆ ಉಡುಪಿ ಶಾಸಕ ಯಶ್ ಪಾಲ ಸುವರ್ಣ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಬ್ರಹ್ಮಾವರ ಬಿಲ್ಲವ ಸೇವಾ ಸಂಘದ ಅಧ್ಯಕ್ಷರೂ, ಬಿಜೆಪಿ ಮುಖಂಡರಾದ ಬಿ. ಎನ್. ಶಂಕರ ಪೂಜಾರಿ, ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ರಾಜೀವ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.