ಶಿರಹಟ್ಟಿ: ತಾಲೂಕಿನ ಯಳವತ್ತಿ ಗ್ರಾ ಪಂ ವ್ಯಾಪ್ತಿ ನರೇಗಾ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಮೂಡಿಸಿದ ಪಿಡಿಓ ಸವಿತಾ ಹುನಗುಂದ
ತಾಲೂಕಿನ ಯಳವತ್ತಿ ಗ್ರಾ ಪಂ ವ್ಯಾಪ್ತಿ ನರೇಗಾ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಮೂಡಿಸಿದ ಪಿಡಿಓ ಸವಿತಾ ಹುನಗುಂದ ಮತದಾನ ನಮಗೆಲ್ಲ ನೀಡಿರುವ ಸಂವಿಧಾನಿಕ ಹಕ್ಕು, ಅದನ್ನು ಕಡ್ಡಾಯವಾಗಿ ಚಲಾಯಿಸೋಣ, ಈ ಹಕ್ಕನ್ನು ತಪ್ಪದೇ ಚಲಾಯಿಸಿ ಸುಭದ್ರ ದೇಶವನ್ನು ಕಟ್ಟಲು ತಮ್ಮ ಮತ ಚಲಾಯಿಸಿ ಎಂದು ಪಿಡಿಓ ಸವಿತಾ ಹುನಗುಂದ ನರೇಗಾ ಕೂಲಿಕಾರ್ಮಿಕರಿಗೆ ಮತದಾನ ಜಾಗೃತಿಯನ್ನು ಮೂಡಿಸಿದರು.ಅವರು ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ತಾಲೂಕಾ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಇವರುಗಳ ಸಂಯುಕ್ತಾಶ್ರಯದಲ್ಲಿ ನರೇಗಾ ಕೂಲಿಕಾರ್ಮಿಕರಿಗೆ ಮತದಾನ ಜಾಗೃತಿ ಮೂಡಿಸಿದರು