ಬೆಂಗಳೂರು ಉತ್ತರ: ಎಸ್ಎಸ್ಎಲ್ಸಿ ಫಲಿತಾಂಶ, ಬ್ಯಾಡರಹಳ್ಳಿಯ ಖಾಸಗಿ ಶಾಲೆಯ ವಿದ್ಯಾರ್ಥಿನಿ ಫಸ್ಟ್ ರ್ಯಾಂಕ್
ಮೇ 2ನೇ ತಾರೀಖು SSLC ಫಲಿತಾಂಶ ಪ್ರಕಟವಾಗಿದ್ದು 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಯಶಸ್ಸು ಸಾಧಿಸಿದ್ದಾರೆ. ಬ್ಯಾಡರಹಳ್ಳಿಯ ಖಾಸಗಿ ಶಾಲೆಯಲ್ಲಿ ಓದ್ತಿರುವ ಧನಲಕ್ಷ್ಮೀ ಕೂಡ 625ಕ್ಕೆ 625 ಪಡೆದಿದ್ದು ಶಾಲೆಯ ಮಂಡಳಿ ವಿಧ್ಯಾರ್ಥಿನಿ ಸಾಧನೆಗೆ ಮೆಚ್ಚಿ ಸನ್ಮಾನ ಮಾಡಿ ಖುಷಿ ಪಟ್ಟಿದ್ದಾರೆ. ಈ ಬಗ್ಗೆ ಖುಷಿ ವ್ಯಕ್ತಪಡಿಸಿರುವ ವಿಧ್ಯಾರ್ಥಿನಿ ಧನಲಕ್ಷ್ಮೀ ತುಂಬಾ ಖುಷಿ ಆಗ್ತಿದೆ, ತಂದೆ ತಾಯಿಯ ಶ್ರಮದಿಂದ ಹೈ ಸ್ಕೋರ್ ಮಾಡಿದ್ದೇನೆ ನನಗೆ ಅವರೇ ಸ್ಪೂರ್ತಿ ಎಂದಿದ್ದಾಳೆ. ಇನ್ನು ವಿಧ್ಯಾರ್ಥಿನಿ ತಂದೆ ಮೋಹನ್ ಮಾತನಾಡಿ ಮಗಳು ಮೊದಲ ಸ್ಥಾನ ಬಂದಿರೋದಕ್ಕೆ ಖುಷಿ ಆಗ್ತಿದೆ, ಹಗಲು ರಾತ್ರಿ ಎನ್ನದೆ ಓದ್ತಿದ್ಲು. ಕಷ್ಟಪಟ್ಟು ಓದಿದ್ದಕ್ಕೆ ಈ ರೀತಿ ರಿಸಲ್ಟ್ ಬಂದಿದೆ ಅಂತಾ ಸಂತಸ ವ್ಯಕ್ತಪಡಿಸಿದ್ರು.