ಶ್ರೀರಂಗಪಟ್ಟಣ: ಕಿರಂಗೂರು ಬಳಿ ಆಸ್ತಿ ವಿಚಾರಕ್ಕೆ ಸಹೋದರ ಕುಟುಂಬ ನಡುವೆ ಒಡೆದಾಟ
ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಬಳಿ ಆಸ್ತಿ ವಿಚಾರಕ್ಕೆ ಸಹೋದರ ಕುಟುಂಬ ನಡುವೆ ಒಡೆದಾಟ ನಡೆದಿರುವ ಘಟನೆ ಜರುಗಿದೆ. ಶ್ರೀರಂಗಪಟ್ಟಣದ ಕಿರಂಗೂರು ಬಳಿ ಆಸ್ತಿ ಕಲಹದಿಂದಾಗಿ ಸಹೋದರ ಕುಟುಂಬದ ನಡುವೆ ಬಡಿದಾಟ ನಡೆದಿದೆ. ತಮ್ಮನ ಪತ್ನಿ ಹಾಗೂ ಮಕ್ಕಳ ಮೇಲೆ ಅಣ್ಣನ ಕುಟುಂಬದಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಗುಂಡಪ್ಪ ಮತ್ತು ಅವರ ಕುಟುಂಬದವರು ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕ್ಯಾತೆ ತೆಗೆದು ಗಲಾಟೆ ನಡೆಸಿ, ತಮ್ಮನ ಮಕ್ಕಳ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣ ಶ್ರೀರಂಗ