ಲಿಂಗಸೂರು: ಲಿಂಗಸುಗೂರು : ನೋಟಿಸ್ ಕೊಡದೆ ಅಮಾನತ್ತು ಮಾಡಿರುವುದು ತಪ್ಪು
ಆರ್ ಎಸ್ ಎಸ್ ಪಥಸಂಚಲನದಲ್ಲಿ ಭಾಗಿ ಹಿನ್ನೆಲೆ ಪಿಡಿಓ ಪ್ರವೀಣ್ ಅಮಾನತ್ತು ವಿಚಾರಕ್ಕೆ ರಾಯಚೂರು ಜಿಲ್ಲೆಯ ಲಿಂಗಸ್ಗೂರು ಪಟ್ಟಣದ ನಿವಾಸದಲ್ಲಿ ಪ್ರತಿಕ್ರಿಯಿಸಿದ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್, ಆಪ್ತ ಸಹಾಯಕನಾಗಿರುವ ಪ್ರವೀಣ್ ಗೆ ಕನಿಷ್ಠ ನೋಟಿಸ್ ಕೊಡದೆ ಅಮಾನತ್ತು ಮಾಡಿರುವುದು ತಪ್ಪು ಎಂದರು. ಸರ್ಕಾರಕ್ಕೆ ಏನೇನು ಅವಕಾಶ ಇದೆ, ಅಧಿಕಾರ ಚಲಾಯಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.