ಶೋರಾಪುರ: ನಗರದ ಗರುಡದ್ರಿ ಕಲಾಮಂದಿರದಲ್ಲಿ ಸೆ.22 ರಿಂದ 39 ನೇ ನಾಡಹಬ್ಬ ಉತ್ಸವ ಆಚರಣೆ, ಆಮಂತ್ರಣ ಪತ್ರಿಕೆ ಬಿಡುಗಡೆ,
೩೯ ನೇ ನಾಡಹಬ್ಬ ಉತ್ಸವ ಆಚರಣೆ ಸೆ.೨೨ ರಿಂದ ಪ್ರಾರಂಭ ಸುರಪುರ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕನ್ನಡ ಸಾಹಿತ್ಯ ಸಂಘ, ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಮತ್ತು ನಾಡಹಬ್ಬ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಸೆ.೨೨ ರಿಂದ ಅ.೧ ರವರೆಗೆ ೩೯ ನೇ ನಾಡಹಬ್ಬ ಉತ್ಸವ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ರಾಜಾ ಮುಕುಂದ ನಾಯಕ ಹೇಳಿದರು. ನಗರದ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ನಲ್ಲಿ ಗುರುವಾರ ನಾಡಹಬ್ಬ ಉತ್ಸವ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.೨೨ ರಂದು ಬೆಳಗ್ಗೆ ೧೧ ಗಂಟೆಗೆ ನಾಡದೇವಿಯ ಭಾವಚಿತ್ರದ ಮೆರಣಿಗೆಯು ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಗರುಡಾದ್ರಿ ಕಲಾ