ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು ಮತ್ತು ದೊಡ್ಡಬೆಳವಂಗಲ ಹೋಬಳಿಯಲ್ಲಿ ಟೆರ್ರಾಫಾರಂ ಮತ್ತು ಎಂಎಸ್ಜಿಪಿ ಎಂಬ ಘನತ್ಯಾಜ್ಯದ ಹೆಮ್ಮಾರಿಯನ್ನು ಟೆಕ್ನಾಲಜಿ ಹೆಸರಿನಲ್ಲಿ ಮತ್ತೆ ವಿಸ್ತರಿಸಿ ಪುನರಾರಂಭಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಇದರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದುನ ವ ಬೆಂಗಳೂರು ಹೋರಾಟ ಸಮಿತಿಯ ಸಂಸ್ಥಾಪಕ ಅದ್ಯಕ್ಷ ಪ್ರದೀಪ್ ಕುಮಾರ್ ಎಚ್ಚರಿಕೆ ನೀಡಿದರು. ತಾಲೂಕಿನ ಸಾಸಲು ಮತ್ತು ದೊಡ್ಡಬೆಳವಂಗಲ ಹೋಬಳಿಗಳ ಜನತೆಯ ಬದುಕಿನ ನೆಮ್ಮದಿ ಕಿತ್ತು ಹಲವು ದಶಕಗಳಿಗಾಗುವಷ್ಟು ವಿಷವನ್ನು ಪ್ರಕೃತಿಯ ಒಡಲಿಗೆ ಪ್ರಾಶನ ಮಾಡಿ ಸಹಸ್ರಾರು ಜನತೆಯ ಜೀವಗಳನ್ನು ನರಕಕೂಪಕ್ಕೆ ತಳ್ಳಿದ ಟೆರ್ರಾಫಾರಂ ಎಂಬ ಕಸದ ಹೆಮ್ಮಾರಿ