ಮಳವಳ್ಳಿ: ಪಟ್ಟಣದಲ್ಲಿ ನಡೆದ ಸರ್ಕಾರಿ ನೌಕರರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಸೇವಾ ಪುರಸ್ಕಾರ ಸಮಾರಂಭ
ಮಳವಳ್ಳಿ : ಯಾವುದೇ ನೌಕರ ಅಥವಾ ಅಧಿಕಾರಿ ಶಿಸ್ತು ಪ್ರಾಮಾಣಿಕತೆ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅಂತಹವರು ಒತ್ತಡದಿಂದ ಮುಕ್ತರಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ತಹಶಿಲ್ದಾರ್ ಡಾ ಲೋಕೇಶ್ ಅಭಿಪ್ರಾಯ ಪಟ್ಟಿದ್ದಾರೆ. ಮಳವಳ್ಳಿ ಪಟ್ಟಣದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಸಂಘದ ಕಚೇರಿ ಆವರಣದಲ್ಲಿ ಶುಕ್ರವಾರ ಸಂಜೆ 8.30 ರ ಸಮ ಯದಲ್ಲಿ ಏರ್ಪಡಿಸಲಾಗಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸೇವಾ ಪುರಸ್ಕಾರ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾಡಿನ ಆರುವರೆ ಕೋಟಿ ಜನರಲ್ಲಿ ಸುಮಾರು 5 ಲಕ್ಷ ಮಂದಿ ಮಾತ್ರ ಖಾಯಂ ಸರ್ಕಾರಿ ನೌಕರಿ ಪಡೆದಿರುವ ನಾವೇ ಅದೃಷ್ಟ ಶಾಲಿಗಳಿದ್ದು ಸಿಕ್ಕಿರುವ ಈ ಸದವಕಾಶವನ್ನು ಜನಸೇವೆಗೆ ಬಳಸಿಕೊಳ್ಳುವಂತೆ ಕರೆ ನೀಡಿದರು.