ಹೊಸನಗರ: ಹುಂಚಗ್ರಾಮದ ತೋಟದಲ್ಲಿ ಕೊಳೆತ ಸ್ಥಿತಿಯಲ್ಲಿ 2 ಕಾಡುಕೋಣಗಳ ಮೃತ ದೇಹ ಪತ್ತೆ
ತೋಟವೊಂದರ ಹೊಂಡದಲ್ಲಿ ಕೊಳೆತ ಸ್ಥಿತಿಯಲ್ಲಿ ಎರಡು ಕಾಡುಕೋಣಗಳ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದಲ್ಲಿ ನಡೆದಿದೆ ಹುಂಚ ಗ್ರಾಮದ ಸರ್ವೆ ನಂಬರ್ 52/2ರ ರಾಮಪ್ಪ ಎಂಬುವರಿಗೆ ಸೇರಿದ ಅಡಿಕೆ ತೋಟದ ಹೊಂಡವೊಂದರಲ್ಲಿ ಎರಡು ಕಾಡುಕೋಣಗಳ ಮೃತದೇಹ ಪತ್ತೆಯಾಗಿದ್ದು, ಹಲವಾರು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಭಾನುವಾರ ರಾತ್ರಿ ಘಟನೆ ಬೆಳಕಿಗೆ ಬಂದಿದ್ದು, ಮಾಹಿತಿಯು ಸೋಮವಾರ ಲಭ್ಯವಾಗಿದೆ. ಸೋಮವಾರ ಮೃತ ಕಾಡುಕೋಣಗಳ ಮರಣೋತ್ತರ ಪರೀಕ್ಷೆ ನ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಲಿದ್ದಾರೆ.