ಕಲಬುರಗಿ: ನ2 ರಂದು ಪಥಸಂಚಲನ ನಡೆಸಲು ಮನವಿ ಸಲ್ಲಿಸಲಾಗಿದೆ: ನಗರದಲ್ಲಿ ಆರ್ಎಸ್ಎಸ್ ಮುಖಂಡ ಅಶೋಕ ಪಾಟೀಲ್
ಕಲಬುರಗಿ : ನವೆಂಬರ್ 2 ರಂದು ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆಯೆಂದು ಆರ್ಎಸ್ಎಸ್ ಮುಖಂಡ ಅಶೋಕ ಪಾಟೀಲ್ ಹೇಳಿದ್ದಾರೆ.. ಅ20 ರಂದು ಮಧ್ಯಾನ 2 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಡಿಸಿಗೆ ಮನವಿ ಕೊಡಲು ಕಚೇರಿಗೆ ತೆರಳಿದ್ದ ವೇಳೆ ಅಲ್ಲಿ ಯಾರು ಇರಲಿಲ್ಲ.. ಬಳಿಕ ಅವರ ಗೃಹ ಕಚೇರಿಗೆ ತೆರಳಿದ್ದಾಗ ಅಲ್ಲಿ ಮೇಡಂ ಇರಲಿಲ್ಲ. ಆದಕಾರಣ ಡಿಸಿಯವರ ಅಧಿಕೃತ ಮೇಲ್ ಮತ್ತು ವಾಟ್ಸಪ್ಗೆ ಅನುಮತಿ ಕೋರಿ ಮನವಿ ಸಲ್ಲಿಸಲಾಗಿದೆ ಅಂತಾ ಅಶೋಕ ಪಾಟೀಲ್ ಸ್ಪಷ್ಟಪಡಿಸಿದ್ದಾರೆ