ಗುಂಡ್ಲುಪೇಟೆ: ಪ್ರತಿಭಟನೆಗೆ ಕರೆ ಕೊಟ್ಟ ಬೆನ್ನಲ್ಲೇ ಪಟ್ಟಣ ಠಾಣೆಯಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು
ಗುಂಡ್ಲುಪೇಟೆ ತಾಲೂಕಿನಲ್ಲಿ ಬೊಮ್ಮಲಾಪುರದಲ್ಲಿ ಅರಣ್ಯ ಸಿಬ್ಬಂದಿ ಬೋನಿಗೆ ಕೂಡಿ ಹಾಕಿದ ಘಟನೆಯಲ್ಲಿ ಪ್ರತಿದೂರು ಕೊಟ್ಟಿದ್ದರ ಸಂಬಂಧ ಅರಣ್ಯಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಳೆದ 10 ರಂದೇ ಗ್ರಾಮದ ಕಮಲಮ್ಮ ಎಂಬವರು ಅರಣ್ಯಾಧಿಕಾರಿಗಳು ಹಲ್ಲೆ, ಹತ್ಯೆಗೆ ಯತ್ನ ದೂರು ಕೊಟ್ಟಿದ್ದರು. ಆದರೆ, ದೂರು ಸ್ವೀಕರಿಸಿ ಎಫ್ಐಆರ್ ದಾಖಲು ಮಾಡಿರಲಿಲ್ಲ. ಈ ಬಗ್ಗೆ ಆಕ್ರೋಶಗೊಂಡಿದ್ದ ಗ್ರಾಮಸ್ಥರು, ರೈತ ಸಂಘದ ಮುಖಂಡರು ಸಭೆ ಸೇರಿ ಸೆ.15 ರಂದು ಠಾಣೆ ಮುಂಭಾಗ ಧರಣಿ ನಡೆಸಲು ಕರೆ ಕೊಟ್ಟಿದ್ದರು. ಇದರ ಬೆನ್ನಲ್ಲೇ ಗುಂಡ್ಲುಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.A1 ಆಗಿ ಡಿಆರ್ ಎಫ್ಒ ಜ್ಞಾನಶೇಖರ್, ಕಾರ್ತಿಕ್ ಯಾದವ್, ಶಿವಣ್ಣ,ನಾಗೇಶ್ ಸೇರಿ ಅರಣ್ಯಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.