ಜೇವರ್ಗಿ: ಕೊಚ್ಚಿಹೋದ ನರಿಬೋಳ ಸೇತುವೆ: ಗುತ್ತಿಗೆದಾರನಿಗೆ ₹4.86 ಕೋಟಿ ದಂಡ ಹಾಕಲು ಸರ್ಕಾರಕ್ಕೆ ಶಿಫಾರಸು
ಕಲಬುರಗಿ : ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನರಿಬೋಳ ಮತ್ತು ಚಾಮನೂರು ಮಧ್ಯೆಗಿನ ಭೀಮಾ ನದಿಯಲ್ಲಿನ ಕೋಟ್ಯಾಂತರ ರೂಪಾಯಿ ವೆಚ್ಚದ ಬೃಹತ್ ಸೇತುವೆ ಕೊಚ್ಚಿಹೋದ ಘಟನೆಗೆ ಸಂಬಂಧಿಸಿದಂತೆ, ಕಳಪೆ ಕಾಮಗಾರಿ ಮಾಡಿದ ಕೆಎಂವಿ ಕಂಪನಿ ವತಿಯಿಂದ ₹4.86 ಕೋಟಿ ದಂಡ ವಸೂಲಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ತಿಳಿಸಿದ್ದಾರೆ.. ಅ25 ರಂದು ಮಧ್ಯಾನ 3 ಗಂಟೆಗೆ ಸೇತುವೆ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, 45 ಕೋಟಿಗೂ ಅಧಿಕ ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದ ಸೇತುವೆ ಕಳೆದ ಏಳೆಂಟು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಆದರೆ ಇತ್ತೀಚೆಗೆ ಸುರಿದ ಮಳೆ ಪ್ರವಾಹಕ್ಕೆ ಸೇತುವೆಯ ಸ್ಲ್ಯಾಬ್‌ಗಳು ಕೊಚ್ಚಿಕೊಂಡು ಹೋಗಿದ್ದವು.