ಶಿವಮೊಗ್ಗ: ಇಡಿ ದಾಳಿ ಮಾಡಿಸೋದು, ಹೆದರಿಸೋದು ಕೇಂದ್ರಕ್ಕೆ ಚಟ: ನಗರದಲ್ಲಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆರೋಪ
ಇಡಿ ದಾಳಿ ಮಾಡಿಸುವುದು, ಹೆದರಿಸೋದು ಅವರ ಚಟವಾಗಿದೆ ಎಂದು ಶಿವಮೊಗ್ಗ ನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಆರೋಪಿಸಿದ್ದಾರೆ. ಗುರುವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಡಿ ದಾಳಿಯನ್ನು ಎರಡು ರೀತಿಯಲ್ಲಿ ನೋಡಬೇಕು. ಕಾನೂನು ರೀತಿ ಆದರೆ ಸರಿ. ಕೇಂದ್ರ ಸರ್ಕಾರಕ್ಕೆ ಒಂದು ಚಟ ಇದೆ. ಇಡಿ ದಾಳಿ ಮಾಡಿಸುವುದು ಹೆದರಿಸುವುದು ಅವರ ಚಟ ಇಂತಹ ವಿಚಾರದಲ್ಲಿ ಕಾನೂನು ಮೇಲಿರಬೇಕು ಕಾನೂನು ದುರುಪಯೋಗ ಆಗಬಾರದು ಎಂದು ಹೇಳಿದರು.