ಸೂಪಾ: ಕುಂಬಾರವಾಡ ನಾಡಕಚೇರಿಗೆ ಭೇಟಿ ನೀಡಿದ ಪ್ರಾದೇಶಿಕ ಆಯುಕ್ತೆ ಜಾನಕಿ.ಕೆ.ಎಂ
ಜೋಯಿಡಾ : ತಾಲೂಕಿನ ಕುಂಬಾರವಾಡ ನಾಡಕಚೇರಿಗೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಾನಕಿ.ಕೆ.ಎಂ ಅವರು ಮಂಗಳವಾರ ಸಂಜೆ 4:30 ಗಂಟೆ ಸುಮಾರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಚೇರಿಯಲ್ಲಿರುವ ಕಡತಗಳನ್ನು ಪರಿಶೀಲನೆ ನಡೆಸಿದರು. ನಾಡಕಚೇರಿಯ ಕರ್ತವ್ಯ ನಿರ್ವಹಣೆಯ ಕುರಿತಾಗಿ ಅಗತ್ಯ ಮಾಹಿತಿ ಮಾರ್ಗದರ್ಶನವನ್ನು ನೀಡಿದರು. ಈ ಸಂದರ್ಭದಲ್ಲಿ ತಹಸಿಲ್ದಾರ್ ಮಂಜುನಾಥ್ ಮುನ್ನೋಳ್ಳಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.