ಬೆಂಗಳೂರು ಉತ್ತರ: ಪಾಕಿಸ್ತಾನ ಜೊತೆ ಮ್ಯಾಚ್ ಆಡಿದ ಬಗ್ಗೆ ಬಿಜೆಪಿ ನಾಯಕರು ಬಾಯ್ಬಿಡಲಿ – ಸಂತೋಷ್ ಲಾಡ್
ಪಾಕಿಸ್ತಾನ ಜೊತೆ ಮ್ಯಾಚ್ ಆಡಿದ ಬಗ್ಗೆ ಬಿಜೆಪಿ ನಾಯಕರು ಬಾಯಿಬಿಟ್ಟು ಮಾತಾಡಲಿ. ಬಿಜೆಪಿಯವರಿಗೆ ನಾಚಿಕೆ, ಮಾನ-ಮರ್ಯಾದೆ ಇಲ್ಲ ಎಂದು ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಮತಾಂತರ ಆದವರಿಗೆ ಮೂಲ ಜಾತಿ ಜೊತೆ ಧರ್ಮ ನಮೂದು ಮಾಡುವ ಬಗ್ಗೆ ಕಾಲಂ ಇರುವ ಬಗ್ಗೆ ಬಿಜೆಪಿ ವಿರೋಧ ಮಾಡುತ್ತಿರುವ ವಿಚಾರವಾಗಿ ಮಂಗಳವಾರ ಮಧ್ಯಾಹ್ನ ಮಾಧ್ಯಮಗಳಿಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಇಂತಹ ವಿಷಯವನ್ನೇ ಮಾತಾಡೋದು. ಪಾಕಿಸ್ತಾನದ ಜೊತೆ ಮ್ಯಾಚ್ ಆಡಿದ ಬಗ್ಗೆ ಬಿಜೆಪಿ ಅವರು ವಿರೋಧ ಮಾಡಲಿ ನೋಡೋಣ. ಜಾತಿ, ಧರ್ಮ ಬಂದರೆ ಮಾತ್ರ ಇವರು ವಿರೋಧ ಮಾಡೋದು. ನಾಚಿಕೆ, ಮಾನ-ಮರ್ಯಾದೆ ಇದೆಯಾ ಇವರಿಗೆ ಎಂದು ಆಕ್ರೋಶ ಹೊರಹಾಕಿದರು.