ಕಲಬುರಗಿ: ಸರ್ಕಾರದ ಖಜಾನೆಯಲ್ಲಿ ಹಣ ಇದೆಯೋ ಇಲ್ವೋ? ನಗರದಲ್ಲಿ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ
ಕಲಬುರಗಿ : ಸರ್ಕಾರದ ಬೊಕ್ಕಸದಲ್ಲಿ ಅಭಿವೃದ್ಧಿಗಾಗಿ ಹಣ ಇದೆಯೋ ಇಲ್ವೋ... ಸರ್ಕಾರದ ಹಣ ಎಲ್ಲಿ ಹೇಗೆ ಖರ್ಚಾಗ್ತಿದೆ ಅನ್ನೊದು ಸರ್ಕಾರವೇ ಬಹಿರಂಗ ಪಡಿಸಬೇಕೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.. ಸೆಪ್ಟೆಂಬರ್16 ರಂದು ಬೆಳಗ್ಗೆ 10 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಹೋದ ಕಡೆಯಲ್ಲೆಲ್ಲ ಸಾವಿರಾರು ಕೋಟಿ ರೂಪಾಯಿ ಘೋಷಣೆ ಮಾಡ್ತಾರೆ.. ಆದರೆ ಈ ಸರ್ಕಾರಕ್ಕೆ ಒಂದು ಹೊಸ ರಸ್ತೆಯಾಗಲಿ ಅಥಾವ ಗುಂಡಿ ಮುಚ್ಚೊದಾಗಲಿ ಮಾಡೋಕೆ ಸಾಧ್ಯವಾಗ್ತಿಲ್ಲ ಅಂತಾ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.. ಪ್ರತಿವರ್ಷ ದಲಿತರ ಅಭಿವೃದ್ಧಿಗಾಗಿ ಇರೋ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನ ದುರ್ಬಳಕೆ ಮಾಡಿಕೊಳ್ತಿದಾರೆಂದು ನಿಖಿಲ್ ಕಿಡಿಕಾರಿದ್ದಾರೆ.