ಕೃಷ್ಣರಾಜಪೇಟೆ: ಕೋಮನಹಳ್ಳಿ ಗ್ರಾಮಗಳಲ್ಲಿ 1 ಕೋಟಿ 20 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಚ್ ಟಿ ಮಂಜು
ಕೆ.ಆರ್.ಪೇಟೆ ತಾಲೂಕಿನ ಕರೋಟಿ,ಕೋಮನಹಳ್ಳಿ ಗ್ರಾಮಗಳಲ್ಲಿ 1 ಕೋಟಿ 20 ಲಕ್ಷ ರೂ ವೆಚ್ಚದಲ್ಲಿ ಶಾಸಕ ಎಚ್.ಟಿ.ಮಂಜು ಅವರು ಗುದ್ದಲಿ ಪೂಜೆ ನೆರವೇರಿಸಿದರು. ಕೆ ಆರ್ ಪೇಟೆ ತಾಲೂಕಿನ ಕಸಬಾ ಹೋಬಳಿಯ ಕರೋಟಿ ಕೋಮನಹಳ್ಳಿ ಗ್ರಾಮಗಳಲ್ಲಿ ನನ್ನ ಅನುದಾನದಲ್ಲಿ ಹತ್ತು ಲಕ್ಷರೂ ವೆಚ್ಚದಲ್ಲಿ ಸಿಮೆಂಟ್ ರಸ್ತೆ ಹಾಗೂ ಹರಿಹರಪುರದಿಂದ ಕೃಷ್ಣಪುರ ಸಂಪರ್ಕಿಸುವ ರಸ್ತೆ ಮುಖ್ಯ ರಸ್ತೆಗೆ ಪಿಡಬ್ಲ್ಯೂಡಿ ಇಲಾಖೆಯಿಂದ ಸುಮಾರು 1.20 ಕೋಟಿ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ದೇನೆ ಎಂದರು. ಗ್ರಾ.ಪಂ ಮಾಜಿ ಅಧ್ಯಕ್ಷ ಮಾಕವಳ್ಳಿ ಮಂಜೇಗೌಡ ಮಾತನಾಡಿ, ಇಂದು ತಾಲೂಕಿನಲ್ಲಿ ಹಂತ-ಹಂತವಾಗಿ ಕ್ಷೇತ್ರದ ಎಲ್ಲ ಗ್ರಾಮಗಳು ಅಭಿವೃದ್ಧಿ ಹೊಂದುತ್ತಿವೆ. ಇವರ ಸಹಕಾರದಿಂದ ನಮ್ಮ ಗ್ರಾಪಂ ವ್ಯಾಪ್ತಿ