ಬೆಂಗಳೂರು ಉತ್ತರ: RSS ಕಚೇರಿಗೆ ಮುತ್ತಿಗೆ! ಪೊಲೀಸರಿಗೆ ಕ್ಯಾರೇ ಎನ್ನದ ಕಾಂಗ್ರೆಸ್ ಕಾರ್ಯಕರ್ತರು! ಚಾಮರಾಜಪೇಟೆಯಲ್ಲಿ ಪ್ರೊಟೆಸ್ಟ್ ಕಾವು!
ಅಕ್ಟೋಬರ್ 19 ಮಧ್ಯಾಹ್ನ 3:00 ಗಂಟೆಗೆ ಚಾಮರಾಜಪೇಟೆಯ ಆರ್ ಎಸ್ ಎಸ್ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಗೆ ಅವಕಾಶ ಇಲ್ಲ ಅಂತ ಪೊಲೀಸರು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದರೂ ಕೂಡ ಕಾರ್ಯಕರ್ತರು ಕೇಳುವ ತಾಳ್ಮೆ ಇರಲಿಲ್ಲ. ಅಂಬೇಡ್ಕರ್ ಮತ್ತು ಪ್ರಿಯಾಂಕ ಖರ್ಗೆ ಮುಖವಾಡವನ್ನ ಧರಿಸಿ ಆರ್ ಎಸ್ ಎಸ್ ಕಚೇರಿಗೆ ನುಗ್ಗುವ ಯತ್ನ ಮಾಡಿದ್ರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಕಾರ್ಯಕರ್ತರನ್ನ ವಶಕ್ಕೆ ಪಡೆದರು.