ಮಕ್ಕಳನ್ನು ಹಾಸ್ಟೆಲ್ ಗಳಿಗೆ ಸೇರಿಸುವ ಬದಲು ಮನೆಯಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಪ್ರೀತಿಯಿಂದ ಬೆಳೆಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ಧಾರವಾಡ ಸೃಜನಾ ರಂಗಮಂದಿರದಲ್ಲಿ ನಡೆದ ಮಕ್ಕಳ ಅಕಾಡೆಮಿಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ 6 ಗಂಟೆಗೆ ಭಾಗವಹಿಸಿ ಮಾತನಾಡಿದ ಅವರು, ಮನೆಯಲ್ಲಿ ಸಾಮರಸ್ಯ, ಪ್ರೀತಿ ಮತ್ತು ಹೊಂದಾಣಿಕೆಯನ್ನು ಬೆಳೆಸಿ, ಕುಟುಂಬಗಳ ಸಂಪ್ರದಾಯಗಳನ್ನು ಪಾಲಿಸಿದರೇ ಮಕ್ಕಳು ಪಾಲಕರನ್ನು