ಮಳವಳ್ಳಿ: ಬಡವರಿಗೆ ಬಿಜೆಪಿಯವರು ಒಂದು ಮನೆ ಕೊಟ್ಟಿದ್ದರೆ ರಾಜೀನಾಮೆ ನೀಡುತ್ತೇನೆ, ಮಂಡ್ಯದಲ್ಲಿ ಸಚಿವ ಜಮೀರ್ ಅಹಮದ್ ಹೇಳಿಕೆ
ಮಂಡ್ಯ : ಸ್ಲಂ ಬೋರ್ಡ್ ನಿಂದ ರಾಜೀವ್ ಗಾಂಧಿ ಯೋಜನೆಯಲ್ಲಿ ಒಂದೇ ಒಂದು ಮನೆಯನ್ನ ಬಿಜೆಪಿ ಯವರು ಕೊಟ್ಟಿದ್ರೆ ನಾನು ದೇವರಾಣೆ ರಾಜಕೀಯ ನಿವೃತ್ತಿ ತಗೊಳ್ಳುತ್ತೇನೆ ಎಂದು ವಸತಿ ಸಚಿವ ಜಮೀರ್ ಅಹಮದ್ ಸವಾಲು ಹಾಕಿದ್ದಾರೆ. *ಮಂಡ್ಯದಲ್ಲಿ ಶನಿವಾರ ಸಾಯಂಕಾಲ 5.30 ರ ಸಮಯ ದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು ಬಿಜೆಪಿ ಸಾಬೀತು ಮಾಡಿದ್ರೆ ಸಾಯಂಕಾಲವೇ ರಾಜ್ಯಪಾಲರ ಮನೆಗೆ ಹೋಗಿ ರಾಜಿನಾಮೆ ಕೊಡ್ತೇನೆ ಎಂದು ವಿಪಕ್ಷ ನಾಯಕರಾದ ವಿಜಯೇಂದ್ರ, ಅಶೋಕ್ ಅವರಿಗೆ ಓಪನ್ ಚಾಲೆಂಜ್ ಮಾಡಿದ ಜಮೀರ್ ಅಹಮದ್ . ಬಿಜೆಪಿಯವರಿಗೆ ಕೆಲಸ ಇಲ್ಲ ಬರಿ ಟಿಕೇ ಮಾಡೋದೆ ಕೆಲಸ.ಯಾವುದಾದರೂ ಅಭಿವೃದ್ಧಿ ಕೆಲಸ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.