ಬೆಂಗಳೂರು ಉತ್ತರ: ಈಗಲೇ ಯಾಕೆ ಪಥ ಸಂಚಲನ ಮಾಡಬೇಕು?; ಆರ್ಎಸ್ಎಸ್ಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ
ಈಗಲೇ ಯಾಕೆ ಪಥ ಸಂಚಲನ ಮಾಡಬೇಕು? ಸಂವಿಧಾನ, ಕಾನೂನಿಗಿಂತ ನೀವು ದೊಡ್ಡವರೇ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಭಾನುವಾರ ಬೆಂಗಳೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮತ್ತೊಮ್ಮೆ ಅರ್ಜಿ ಹಾಕಿದರೆ ಪರಿಗಣಿಸಿ ಎಂದು ಕೋರ್ಟ್ ಹೇಳಿದೆ. ಆದರೆ ಇಂದು ಪಥ ಸಂಚಲನ ಮಾಡುವಂತಿಲ್ಲ ಮಾಡಲೂಬಾರದು ಎಂದು ಕೋರ್ಟ್ ಪ್ರಕಾರ ಹೇಳಿದಂತಾಯ್ತು. ಸಮಾಜದಲ್ಲಿ ಶಾಂತಿ ಕಾಪಾಡುವುದು ಬಹಳ ಮುಖ್ಯ. ಮತ್ತೊಮ್ಮೆ ಅರ್ಜಿ ಕೊಡಲಿ. ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಪರಿಸ್ಥಿತಿ ನೋಡಿಕೊಂಡು ಸರ್ಕಾರ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.