ಕಲಬುರಗಿ: ಪಥಸಂಚಲನಕ್ಕೆ ಅವಕಾಶ ನೀಡದಿದ್ರೆ ಮುಂದಾಗುವ ಅನಾಹುತಕ್ಕೆ ನಿವೇ ಹೊಣೆ: ನಗರದಲ್ಲಿ ದಲಿತ ಪ್ಯಾಂಥರ್ನ ಮಲ್ಲಪ್ಪ ಹೊಸಮನಿ ಎಚ್ಚರಿಕೆ
ಕಲಬುರಗಿ : ನವೆಂಬರ್ 2 ರಂದು ಚಿತ್ತಾಪುರದಲ್ಲಿ ಪಥಸಂಚಲನ ಮಾಡಲು ನಮಗೂ ಅವಕಾಶ ನೀಡದಿದ್ದರೆ ಮುಂದಾಗುವ ಅನಾಹುತಕ್ಕೆ ನಿವೇ ಹೊಣೆ ಅಂತಾ ಜಿಲ್ಲಾಡಳಿತ ಮತ್ತು ಚಿತ್ತಾಪುರ ತಾಲೂಕ ಆಡಳಿತಕ್ಕೆ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಎಚ್ಚರಿಕೆ ನೀಡಿದ್ದಾರೆ.. ಅ22 ರಂದು ಮಧ್ಯಾನ 12 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಥಸಂಚಲನ ನಡೆಸಲು ಆರ್ಎಸ್ಎಸ್ ಮನವಿ ಸಲ್ಲಿಸಿದೆ.. ನಮಗೂ ಸಹ ಅವತ್ತೆ ಪಥಸಂಚಲನ ಮಾಡಲಯ ಅವಕಾಶ ನೀಡಬೇಕು.. ಇಲ್ಲವಾದಲ್ಲಿ ಮುಂದಾಗೋ ಅನಾಹುತಕ್ಕೆ ನಿವೇ ಹೊಣೆ ಅಂತಾ ಮಲ್ಲಪ್ಪ ಹೊಸಮನಿ ಎಚ್ಚರಿಕೆ ನೀಡಿದ್ದಾರೆ