ಕಲಬುರಗಿ: ನಗರದ ಹುಮನಬಾದ್ ರಿಂಗ್ ರಸ್ತೆಯಲ್ಲಿ ಬೈಕ್‌ಗೆ ಟ್ಯಾಂಕರ್ ಡಿಕ್ಕಿ: ಸ್ಥಳದಲ್ಲೆ ಇಬ್ಬರ ದುರ್ಮರಣ
ಕಲಬುರಗಿ : ಕಲಬುರಗಿ ನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.. ನಗರದ ಹುಮನಬಾದ್ ರಿಂಗ್ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಬೈಕ್‌ಗೆ ಟ್ಯಾಂಕರ್ ಡಿಕ್ಕಿಯಾಗಿ ಬೈಕ್ ಸವಾರಿಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ಅ21 ರಂದು ರಾತ್ರಿ 7 ಗಂಟೆಗೆ ಸಂಭವಿಸಿದೆ.. ಚಲಿಸುತ್ತಿರುವ ಬೈಕ್‌ಗೆ ಹಿಂಬದಿಯಿಂದ ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಅಹ್ಮದ್ ರಸೂಲ್ (55) ಹಾಗೂ ಹಿಂಬದಿ ಸವಾರ ಸ್ಥಳದಲ್ಲೆ ಸಾವನ್ನಪ್ಪಿದಾರೆ. ಇನ್ನೂ ಟ್ಯಾಂಕರ್ ಡಿಕ್ಕಿ ರಭಸಕ್ಕೆ ಅಹ್ಮದ್ ರಸೂಲ್ ತಲೆ ಛಿದ್ರಛಿದ್ರವಾಗಿದ್ದು, ಸ್ಥಳಕ್ಕೆ ಸಂಚಾರಿ ಠಾಣೆ-2 ರಲ್ಲಿ ಪ್ರಕರಣ ದಾಖಲಾಗಿದೆ