ಕಾರವಾರ: ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಜಿಲ್ಲೆಯ ವಿವಿಧ ತಾಲೂಕಿನ 10 ಉಪ ನೋಂದಣಾಧಿಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಬುಧವಾರ ಮಧ್ಯಾಹ್ನ ದಾಳಿ ನಡೆಸಿ ವಿವಿಧ ದಾಖಲೆಗಳನ್ನು ಪರಿಶೀಲನೆ ಮಾಡಿದೆ. ಲಂಚ ಪಡೆಯುವಿಕೆ, ನಕಲಿ ದಾಖಲೆಗಳನ್ನು ಪಡೆದು ನೋಂದಣಿ ಮಾಡುವುದು ಸೇರಿದಂತೆ ವಿವಿಧ ದೂರುಗಳು ಲೋಕಾಯುಕ್ತರಿಗೆ ಸಲ್ಲಿಸಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ಜಿಲ್ಲೆಯ ವಿವಿಧ ಉಪ ನೋಂದಣಾಧಿಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಕಾರವಾರ, ಉಡುಪಿಯ ಲೋಕಾಯುಕ್ತ ಡಿಎಸ್ಪಿಗಳ ತಂಡ ದಾಳಿ ನಡೆಸಿವೆ.