ಚಾಮರಾಜನಗರ: ಉಗೇದನಹುಂಡಿ ಸುತ್ತಮುತ್ತಲು ಹುಲಿ ಸೆರೆ ಕಾರ್ಯಾಚರಣೆ; ಕ್ಯಾಮರಾ ಟ್ರಾಪ್ ನಲ್ಲಿ ಹುಲಿ ಓಡಾಟ ದೃಶ್ಯ ಸೆರೆ
ಚಾಮರಾಜನಗರ ತಾಲೂಕಿನ ಉಗೇದನಹುಂಡಿ ಸೇರಿ ಮೂರು ಗ್ರಾಮಗಳಲ್ಲಿ ಅರಣ್ಯ ಇಲಾಖೆಯು ಹುಲಿ ಸೆರೆ ಕೂಂಬಿಂಗ್ ನಡೆಸುತ್ತಿದ್ದು ಹುಲಿ ಓಡಾಟ ಅರಿಯಲು 20 ಕ್ಕೂ ಹೆಚ್ಚು ಕ್ಯಾಮರಾ ಅಳವಡಿಸಲಾಗಿದೆ. ಎರಡು ಕ್ಯಾಮರಾದಲ್ಲಿ ಹುಲಿ ಓಡಾಟದ ದೃಶ್ಯ ಸೆರೆಯಾಗಿದೆ. ಹುಲಿ ಓಡಾಟದ ದೃಶ್ಯ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. 80 ಕ್ಕೂ ಅಧಿಕ ಸಿಬ್ಬಂದಿ ಈ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು ಹುಲಿ, ಚಿರತೆ ಸುಳಿವು ದೊರೆತ ಕೂಡಲೇ ತುರ್ತು ಕಾರ್ಯಾಚರಣೆ ಕೈಗೊಳ್ಳಲು ಒಂದು ತಂಡವು ಸಿದ್ಧವಾಗಿದೆ.