ಯುವಕರು ವೈಜ್ಞಾನಿಕ ಮನೋಭಾವದಿಂದ ಪರಾಮರ್ಷಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ.ಸಂಪಿಗೆ ತೋಂಟದಾರ್ಯ ಹೇಳಿದರು. ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಆಯೋಜಿಸಿದ "ಧರೆಗೆ ದೊಡ್ಡವರು' ಕಾರ್ಯಕ್ರಮದಲ್ಲಿ ಶನಿವಾರ ಮದ್ಯಾಹ್ನ 2 ಗಂಟೆಗೆ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು. ಶಿಕ್ಷಕರಿರಲಿ, ಹಿರಿಯರಾರೇ ಇರಲಿ ಅವರು ಹೇಳುತ್ತಿರುವುದು ಸರಿಯಾಗಿದೆಯೇ ಎಂಬುದನ್ನು ಪರಾಮರ್