ಬಂಗಾರಪೇಟೆ: ಕಾಮಸಮುದ್ರ ಪೊಲೀಸರ ಕಾರ್ಯಾಚರಣೆ ಓರ್ವ ಆರೋಪಿಬಂಧನ: 3,33,000ರೂ ಬೆಲೆ ಬಾಳುವ ಮಾಂಗಲ್ಯ ವಶಕ್ಕೆ
ಮನೆಕಳ್ಳತನದ ಕುರಿತು ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಕುರಿತು ಪೊಲೋಸರು ಕಾರ್ಯಾಚರಣೆಯನ್ನು ಕೈಗೊಂಡು ಪಿ.ಎಸ್.ಐ ಕಾಮಸಮುದ್ರಂ ಮತ್ತು ತಂಡದವರು ಮನೆ ಕಳವು ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ ಸುಮಾರು ರೂ.3,30,000/- ಮೌಲ್ಯದ 33 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ದ ಕಾನೂನು ಕ್ರಮ ವಹಿಸಿರುತ್ತಾರೆ ಎಂದು ಕಾಮಸಮುದ್ರ ಪೊಲೀಸರು ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.