ಹಳಿಯಾಳ : ಸುದೀರ್ಘ 20 ವರ್ಷಗಳ ಕಾಲ ದೇಶ ಸೇವೆಯಲ್ಲಿ ತೊಡಗಿ ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿರುವ ಹಳಿಯಾಳ ತಾಲೂಕಿನ ಪಾಳಾ ಗ್ರಾಮದ ಯೋಧ ರೋಹಿದಾಸ್ ಪಾಟೀಲ್ ಅವರು ತಮ್ಮ ತಾಯ್ನಾಡಿಗೆ ಆಗಮಿಸಿದ್ದು, ಈ ನಿಟ್ಟಿನಲ್ಲಿ ಶುಕ್ರವಾರ ಸಂಜೆ 5:00 ಗಂಟೆ ಸುಮಾರಿಗೆ ಹಳಿಯಾಳ ಪಟ್ಟಣದ ಶಿವಾಜಿ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು. ವಿಶೇಷವಾಗಿ ಹಳಿಯಾಳದ ಶ್ರೀ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಪರವಾಗಿ ರೋಹಿದಾಸ ಪಾಟೀಲ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ನಿವೃತ್ತ ಜೀವನಕ್ಕೆ ಶುಭ ಹಾರೈಸಲಾಯಿತು.