ಹಳಿಯಾಳ: ಪಟ್ಟಣದ ಅಗ್ನಿಶಾಮಕ ಠಾಣೆಯಿಂದ ಅಲ್ಲೊಳ್ಳಿ ಕ್ರಾಸ್ವರೆಗೆ ಕೈಗೊಳ್ಳಲಿರುವ ರಸ್ತೆ ಸುಧಾರಣಾ ಕಾಮಗಾರಿಗೆ ಆರ್.ವಿ. ದೇಶಪಾಂಡೆ ಭೂಮಿ ಪೂಜೆ
ಹಳಿಯಾಳ : ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಹಳಿಯಾಳ ಪಟ್ಟಣದ ಅಗ್ನಿಶಾಮಕ ಠಾಣೆಯಿಂದ ಅಲ್ಲೊಳ್ಳಿ ಕ್ರಾಸ್ವರೆಗೆ ಅಂದಾಜು ರೂ.90.00 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಿರುವ ರಸ್ತೆ ಸುಧಾರಣಾ ಕಾಮಗಾರಿಗೆ ಬುಧವಾರ ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಶಾಸಕ ಆರ್.ವಿ.ದೇಶಪಾಂಡೆಯವರು ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆ ಅವರು ಈ ರಸ್ತೆ ಕಾಮಗಾರಿಯು ಸ್ಥಳೀಯ ನಾಗರಿಕರ ಸಂಚಾರ ಸುಗಮಗೊಳಿಸುವುದರ ಜೊತೆಗೆ ತುರ್ತು ಸೇವೆಗಳ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ಹೇಳಿ, ಗುಣಮಟ್ಟದ ಕಾಮಗಾರಿಯಾಗಿ ಪೂರ್ಣಗೊಳ್ಳಬೇಕೆಂದು ಸೂಚನೆಯನ್ನು ನೀಡಿದರು.