ಶ್ರೀರಂಗಪಟ್ಟಣ: ಪಟ್ಟಣ ಗಂಜಾಂನಲ್ಲಿ ಸೀಮಂತ ಮಾಡಿದ್ದ ಹಸುಗಳು ಗಂಡು ಕರುಗಳಿಗೆ ಜನ್ಮ
ಶ
ಶ್ರೀರಂಗಪಟ್ಟಣ: ಸೀಮಂತ ಮಾಡಿದ್ದ ಹಸುಗಳು ಗಂಡು ಕರುಗಳಿಗೆ ಜನ್ಮ ಶ್ರೀರಂಗಪಟ್ಟಣದ ಗಂಜಾಮ್‌ನ ಯುವ ರೈತ ಹೇಮಂತ್ ಅವರ ಮನೆಯಲ್ಲಿ ಹಳ್ಳಿಕಾರ್ ತಳಿಯ ಎರಡು ಹಸುಗಳು ಗಂಡು ಕರುಗಳಿಗೆ ಜನ್ಮ ನೀಡಿ ಸಂಭ್ರಮ ಮನೆ ಮಾಡಿದೆ. ಕಳೆದ ತಿಂಗಳು ಹೇಮಂತ್ ತಮ್ಮ ಹಸುಗಳಿಗೆ ಶಾಸ್ರೋಕ್ತವಾಗಿ ಸೀಮಂತ ಮಾಡಿಸಿದ್ದರು. ಹಳ್ಳಿಕಾರ್ ತಳಿಯ ರಾಸುಗಳ ಉಳುವಿಗೆ ಮುಂದಾಗಿರುವ ಹೇಮಂತ್‌ಗೆ ಈ ಘಟನೆ ದ್ವಿಗುಣ ಸಂತಸ ತಂದಿದೆ. ಹಳ್ಳಿಕಾರ್ ಹಸುಗಳು ಬಹಳ ಕಡಿಮೆ ಇರುವುದರಿಂದ ಯುವಗಳಿಗೆ ಹೆಚ್ಚು ಬೇಡಿಕೆ ಇದೆ. ಈಗ ನಮ್ಮ ಹಳ್ಳಿಕಾರ್ ಹಸುಗಳು ಕರುಗಳಿಗೆ ಜನ್ಮ ನೀಡಿರುವುದು ನನಗೆ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು