ದಾವಣಗೆರೆ: ನಗರದಲ್ಲಿ ವಿಚ್ಛೆಧನಕ್ಕೆ ಬಂದಿದ್ದ ಪತ್ನಿಗೆ ನ್ಯಾಯಾಲಯದ ಆವರಣದಲ್ಲೇ ಚೂರಿ ಇರಿದ ಪತಿ
ನಗರದಲ್ಲಿ ವಿಚ್ಛೆಧನಕ್ಕೆ ಬಂದಿದ್ದ ಪತ್ನಿಗೆ ನ್ಯಾಯಾಲಯದ ಆವರಣದಲ್ಲೇ ಚೂರಿ ಇರಿದ ಪತಿ ದಾವಣಗೆರೆ ನಗರದ ಕೌಟುಂಬಿಕಾ ನ್ಯಾಯಾಲಯದ ಆವರಣದಲ್ಲೇ ಹೆಂಡತಿಗೆ ಗಂಡ ಚುರಿ ಇರಿದ ಘಟನೆ ಶನಿವಾರ ಮಧ್ಯಾಹ್ನ 2 ಗಂಟೆಗೆ ನಡೆದಿದೆ. ಪತ್ನಿ ಪದ್ಮ (31) ಚಾಕು ಇರಿತಕ್ಕೆ ಒಳಗಾದ ಮಹಿಳೆ. ಪ್ರವೀಣ್ (36) ಚಾಕು ಇರಿದ ಪತಿ. ದಾವಣಗೆರೆ ನಗರದ ದೇವರಾಜ ಅರಸ್ ಬಡಾವಣೆಯ ನಿವಾಸಿಯಾದ ದಂಪತಿ ವಿಚ್ಛೇಧನದ ವಿಚಾರವಾಗಿ ನ್ಯಾಯಾಲಯಕ್ಕೆ ಬಂದಿದ್ದರು. ಈ ವೇಳೆ ಪತಿ ಪ್ರವೀಣ್ ಪತ್ನಿ ಪದ್ಮಾಗೆ ಚಾಕುವಿನಿಂದ ಮೂರು ಬಾರಿ ಇರಿದಿದ್ದು, ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಪದ್ಮಾರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಪತ್ನಿ ವಿರುದ್ಧವೇ ಪತಿ ಆರೋಪ ಮಾಡಿದ್ದಾನೆ.