ಸಂಡೂರು: ತಾಲ್ಲೂಕಿನ ಯಶವಂತನಗರ ಗ್ರಾಮದ ಹೊರ ವಲಯದ ರಾಘಾಪುರ ಕೆರೆಯಲ್ಲಿ ಶವವಾಗಿ ಪತ್ತೆಯಾದ ಬಾಲಕ
ಸಂಡೂರು ತಾಲ್ಲೂಕಿನ ಯಶವಂತನಗರ ಗ್ರಾಮದ ಹೊರ ವಲಯದ ರಾಘಾಪುರ ಕೆರೆಯಲ್ಲಿ ಈಜಲು ತೆರಳಿದ್ದಾಗ ಕೆರೆಯ ನೀರಿನಲ್ಲಿ ಮುಳಗಿ ಕಾಣೆಯಾಗಿದ್ದ ಬಾಲಕ ಆಕಾಶ್(17) ಬುಧವಾರ ಮಧ್ಯಾಹ್ನ ಶವವಾಗಿ ಪತ್ತೆಯಾಗಿದ್ದಾನೆ. ಯಶವಂತನಗರ ಗ್ರಾಮದ ನಿವಾಸಿ ಬಾಲಕ ಆಕಾಶ್ ಸೋಮವಾರ ಬೆಳಿಗ್ಗೆ ಸ್ನೇಹಿತರ ಜೊತೆಗೆ ಕೆರೆಯಲ್ಲಿ ಬಲೂನ್ ಆಕಾರದ ಟ್ಯೂಬ್ನ ಮೂಲಕ ಈಜಾಡುವಾಗ ಕೆರೆಯಲ್ಲಿ ಮುಳಗಿ ಕಾಣೆಯಾಗಿದ್ದನು. ಕಳೆದ ಮೂರು ದಿನಗಳಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ನಿರಂತರವಾಗಿ ಶೋಧನಾ ಕಾರ್ಯ ನಡೆಸಿದ್ದರಿಂದ ಬಾಲಕನ ಮೃತ ದೇಹ ಪತ್ತೆಯಾಗಿದೆ. ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.