ಬೆಂಗಳೂರು ಉತ್ತರ: ಸಿಗರೇಟ್ ಕೊಡಲು ತಡ ಮಾಡಿದ್ದಕ್ಕೆ ಕಾಂಡಿಮೆಂಟ್ಸ್ ಸಿಬ್ಬಂದಿ ಮೇಲೆ ಹಲ್ಲೆ, ಗಂಗಾ ನಗರದಲ್ಲಿ ಘಟನೆ
ಸಿಗರೇಟ್ ಕೊಡಲು ತಡವಾಯಿತೆಂದು ಕಾಂಡಿಮೆಂಟ್ಸ್ ಸಿಬ್ಬಂದಿ ಮೇಲೆ ಕಿಡಿಗೇಡಿಯೋರ್ವ ಹಲ್ಲೆಗೈದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಸೆಪ್ಟೆಂಬರ್ 15ರಂದು ರಾತ್ರಿ 11:20ರ ಸುಮಾರಿಗೆ ಬಳ್ಳಾರಿ ರಸ್ತೆಯ ಗಂಗಾನಗರದಲ್ಲಿ ಘಟನೆ ಸಂಭವಿಸಿದ್ದು, ಅಂಗಡಿಯ ಸಿಸಿ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿವೆ. ಕಾಂಡಿಮೆಂಟ್ಸ್ ಬಳಿ ಬಂದಿದ್ದ ಆಸಾಮಿಯೊಬ್ಬ ಸಿಗರೇಟ್ ಕೇಳಿದ್ದ. ಗ್ರಾಹಕರು ಹೆಚ್ಚಿಗೆ ಇದ್ದಿದ್ದರಿಂದ ಅಂಗಡಿ ಸಿಬ್ಬಂದಿ ಪ್ರತಿಕ್ರಿಯಿಸುವುದು ವಿಳಂಬವಾಗಿತ್ತು. ಇದರಿಂದ ಸಿಟ್ಟಿಗೆದ್ದ ಆರೋಪಿ ಸಿಬ್ಬಂದಿ ಮೇಲೆ ಹಲ್ಲೆಗೈದಿದ್ದಾನೆ. ಬಳಿಕ ಇತರೆ ಗ್ರಾಹಕರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.