ಮಳವಳ್ಳಿ : ಮಳವಳ್ಳಿ ಪಟ್ಟಣಕ್ಕೆ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ ಉತ್ಸವ ಮೂರ್ತಿ ಮಳವಳ್ಳಿ ಪಟ್ಟಣಕ್ಕೆ ಆಗಮಿಸುವುದರೊಂದಿಗೆ ಒಂದು ವಾರಗಳ ಕಾಲ ಜರುಗಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ 1066ನ ಜಯಂತೋತ್ಸವಕ್ಕೆ ಚಾಲನೆ ದೊರಕಿತು. ಸೋಮವಾರ ಸಂಜೆ 7.30 ರ ಸುಮಾರಿಗೆ ಬೆಳಕವಾಡಿ ಮಾರ್ಗ ವಾಗಿ ಪಟ್ಟಣದ ಪ್ರವಾಸಿ ಮಂದಿ ರದ ಬಳಿಯ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿದ ಉತ್ಸವ ಮೂರ್ತಿ ಯನ್ನು ಸ್ಥಳದಲ್ಲಿ ಹಾಜರಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಉತ್ಸವ ಸಮಿತಿಯ ಅಧ್ಯಕ್ಷರು ಆದ ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರು ಹಾರ ಹಾಕಿ ಬರ ಮಾಡಿಕೊಂಡರು.