ಮೂಡಿಗೆರೆ: ಕೊಟ್ಟಿಗೆಹಾರ, ಚಾರ್ಮಾಡಿಯಲ್ಲಿ ಭಾರಿ ಬಿರುಗಾಳಿ ಮಳೆ.! ವಾಹನ ಸವಾರರು ಕಕ್ಕಾಬಿಕ್ಕಿ.!
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯ ಅಬ್ಬರ ಮುಂದುವರೆದಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು ಜನ ಪರದಾಡುವಂತಾಗಿದೆ.ಚಾರ್ಮಾಡಿ ಘಾಟ್ ನಲ್ಲೂ ಮಳೆಯಾಗುತ್ತಿರುವ ಪರಿಣಾಮ ವಾಹನಗಳ ಸಂಚಾರ ನಿಧಾನವಾಗಿದೆ. ಮಧ್ಯಾಹ್ನ ಬಳಿಕ ಮಳೆಯ ಅಬ್ಬರ ಜೋರಾಗಿದ್ದು ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಕೊಟ್ಟಿಗೆಹಾರ, ಬಣಕಲ್ ನಲ್ಲಿ ಗಂಟೆಗಟ್ಟಲೆ ನಿಂತಲ್ಲೇ ನಿಂತಿರುವ ದೃಶ್ಯಗಳು ಕಂಡು ಬಂತು. ಮಳೆಯ ತೀವ್ರತೆ ಹೆಚ್ಚಿದ್ದರಿಂದ ಕೆಲ ವಾಹನಗಳು ಚಾರ್ಮಾಡಿ ಘಾಟ್.ನಲ್ಲಿ ಸಂಚರಿಸಲಾಗದೇ ಕೊಟ್ಟಿಗೆಹಾರದಲ್ಲಿ ನಿಂತಿದ್ದ ದೃಶ್ಯ ಕಂಡುಬಂದಿದೆ.